God of Abraham, Isaac, and Jacob – ಅಬ್ರಹಾಮ,ಇಸಾಕ, ಯಾಕೆೊೋಬ್ರ ದೆೋವರು
ಕ್ರೈಸ್ತೀಯ ಜೀವನವು, ದೇವರ ಹಿಂದಕ್ಕೆ ತೆಗೆದುಕೊಳ್ಳಲಾಗದ ವಾಗ್ದಾನಗಳ, ದೇವರು ನಮಗಾಗಿ ಕ್ರಿಸ್ತನಲ್ಲಿ ಸಿದ್ಧಪಡಿಸಿರುವ ಎಲ್ಲಾ ಆಸ್ವಾದನೆಯ, ಆತ್ಮನ ಪ್ರೀತಿಯ ಶಿಸ್ತಿನಿಂದ ಪರಿಣಮಿ ಸುವ ಮಾರ್ಪಾಟಿನ ಮೇಲೆ ಆಧರಿಸಿದೆ. ಅಬ್ರಹಾಮ, ಇಸಾಕ ಮತ್ತು ಯಾಕೋಬನ ದೇವರು ಎಂಬ ಪುಸ್ತಕದಲ್ಲಿ ವಾಚ್ಮ್ಯಾನ್ನೀ ಅವರು, ಈ ಹಳೆ ಒಡಂಬಡಿಕೆಯ ಪಿತೃಗಳ ಅನುಭವಗಳನ್ನು ಬಳಸಿ, ಸಂಪೂರ್ಣ ಕ್ರೈಸ್ತೀಯ ಅನುಭವ ವನ್ನು ಒಂದು ಸಾಂಕೇತಿಕ ಕಥೆಯಾಗಿ ಅವರ ಜೀವನಗಳನ್ನು ಪ್ರಸ್ತುತಪಡಿಸುತ್ತಾರೆ. ದೇವರ ವಾಗ್ದಾನಗಳಿಗೆ ವಿಶ್ವಾಸದಿಂದ ನಾವು ಪ್ರತಿಕ್ರಿಯಿಸಿದಾಗಿನಿಂದ, ಕ್ರಿಸ್ತನ ಸ್ವರೂಪಕ್ಕೆ ಅನುರೂಪ ಗೊಳಿಸಲ್ಪಟ್ಟ ಪುತ್ರರೊಳಗೆ ನಮ್ಮ ಅಂತಿಮ ಮಾರ್ಪಾಟಿನವ ರೆಗೆ, ನಾವು ಅಬ್ರಹಾಮ, ಇಸಾಕ ಮತ್ತು ಯಾಕೋಬನ ಅದೇ ಜೀವನದ ಅನುಭವಗಳ ಮೂಲಕ ಹಾಯ್ದು ಹೋಗಬೇಕು. ಅಬ್ರಹಾಮನಂತೆ, ನಮಗೆ ಬಾಧ್ಯತೆಗಾಗಿ ದೇವರ ವಾಗ್ದಾನ ಕೊಡಲ್ಪಟ್ಟಿದೆ; ಇಸಾಕನಂತೆ, ಆತನ ಪುತ್ರನಾದ ಕ್ರಿಸ್ತನಲ್ಲಿ ನಮಗಾಗಿ ದೇವರು ಯೋಜಿಸಿದ ಎಲ್ಲವನ್ನು ನಾವು ಆಸ್ವಾದಿಸ ಬಹುದು; ಯಾಕೋಬನಂತೆ, ನಮ್ಮ ಬೆಳವಣಿಗೆ ಮತ್ತು ಮಾರ್ಪಾಟಿನ ನಿಮಿತ್ತಕ್ಕಾಗಿ ಪವಿತ್ರಾತ್ಮನ ಶಿಸ್ತನ್ನು ನಾವು ಅನುಭವಿಸಬೇಕು.




Reviews
There are no reviews yet.